== ಮುನ್ನುಡಿ == ದೊಡ್ಡಬಳ್ಳಾಪುರ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಕನ್ನಡ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಉದ್ದೇಶದಿಂದ ಮಿತ್ರರು ಸೇರಿ ಸಂಜೆ ತರಗತಿಯನ್ನು ಹಾಗೂ ಅನಕ್ಷರಸ್ಥ ವಯಸ್ಕರಿಗೆ ಕನ್ನಡ ಕಲಿಕಾ ಕೇಂದ್ರಗಳನ್ನು ಪ್ರಾರಂಭಿಸಲಾಯಿತು. ತದನಂತರ ಕನ್ನಡಿಗರನ್ನು ಸಂಘಟಿತರನ್ನಾಗಿ ಮಾಡಲು ಸಂಸ್ಥೆಯ ರೂಪವನ್ನು ಪಡೆದು ಕನ್ನಡಗುರುಕುಲವಾಗಿದೆ. == ಶಿಕ್ಷಣ == === ಕನ್ನಡ ಕಲಿಕಾ ಕೇಂದ್ರ === ಓದಲು ಬರೆಯಲು ಬಾರದ ಅನಕ್ಷರಸ್ಥ ಹಳ್ಳಿಯ ಜನರಿಗೆ ಗ್ರಾಮ ಪಂಚಾಯತ ಸಾಕ್ಷರತಾ ಸಮಿತಿಗಳ ನೆರವಿನಿಂದ ಕನ್ನಡ ಕಲಿಸಲಾಗಿದೆ. === ಸಂಜೆ ತರಗತಿ === ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಂಜೆ ತರಗತಿ 2013ರಿಂದ ಪ್ರಾರಂಭಿಸಲಾಯಿತು.